ನಾನು ಯಾವಾಗಲು ನಗು ಮತ್ತು ಅಳು ಎರಡು ವಿರುದ್ಧ ಭಾವ ಎಂದುಕೊಂಡಿದ್ದೆ . ಆದರೆ ಮನೆಗೆ ತೆರಳಬೇಕಾದರೆ, ಯಾರೋ ಬಿಕ್ಕಳಿಸಿ ನಗುವ ಶಬ್ದ ಕೇಳಿಸಿತು. ಈ ನಗು ಯಾರೋ ಯುವತಿಯರಳಾಗಿತ್ತು. ಆದುದ್ದರಿಂದ, ಏನೋ ಫೋನಿನಲ್ಲಿ ನೋಡಿ ಇಲ್ಲಾ ಆಕಡೆಯಿಂದ ಫೋನಿನಲ್ಲಿ ಯಾರೋ ನಗೆ ಸುದ್ದಿ ಹೇಳಿರಬೇಕು ಅಂದುಕೊಂಡೆ. ಆದರೇ ಈ ಯುವತಿ ನನ್ನ ಕಣ್ಣಂಚಿನಲ್ಲಿ ಹೋಗಬೇಕಾದರೇ, ಯಾಕೋ ಕರಳು ಕಿವುಚಿದ ಭಾವನೆ ಬರತೊಡಗಿತು. ಇದನ್ನು ಆಲೋಚಿಸುವಷ್ಟರಲ್ಲಿ ನನಗೆ ತಿಳಿದು ಬಂತು – ಆ ಯುವತಿ ಬಿಕ್ಕುಳಿಸಿ ನಗುತಿರಲಿಲ್ಲ, ಹೊರತು ಬಿಕ್ಕುಳಿಸಿ ಬಿಕ್ಕುಳಿಸಿ ಅಳುತ್ತಿದ್ದಳು!

ಎಲ್ಲೋ ತೊಂದರೆ ಆಗಲಿ, ನನ್ನ ಕೈಲಾದಷ್ಟು ಸಹಾಯ ಮಾಡಬೇಕು, ಇಲ್ಲವೇ, ಅವರನ್ನ ಕೊಂಚ ಸಮಾಧಾನ ಸ್ಥಾನಕ್ಕೆ ತಲುಪಿಸುವ ಪ್ರಯತ್ನ ಮಾಡೋದು ನನ್ನ ಸ್ವಭಾವ . ಈ ಸಂದರ್ಬದಲ್ಲಿ, “ಎಲ್ಲ ಸಾರಿ ಹೋಗುತ್ತೆ, ತಲೆ ಕೆಡುಸ್ಕೊಬೇಡ” ಎಂದು ಜೋರಾಗಿ ಅವಳ ಕಡೆ ಕೂಗಿ ಹೇಳಬೇಕು ಎಂದು ಭಾರವಾದ ಆಸೆ ಬಂತು. ಆದರೆ, ಅವಳ ಬಿಕ್ಕಳಿಸಿದ ಸದ್ದು ಮಾತೆ ಕಿವಿಗೆ ಬಿತ್ತು. ನಾನು ನನ್ನ ಜೀವನದಲ್ಲಿ ಏನೇ ಕಷ್ಟ, ಸವಾಲು ಎದುರು ಬಂದರು, ನಿಂತು ಎದುರಿಸಬಲ್ಲೆ ಎಂಬ ನಂಬಿಕೆ ಇದೆ. ಆದರೆ, ಯಾರದರೂ ಬಿಕ್ಕಳಿಸಿ ಅಳುವ ಶಬ್ದ ಕೇಳಿದರೆ, ಸ್ಥಗಿತಗೊಳ್ಳುತ್ತೇನೆ. ಕೈಕಾಲು ಆಡದೆ, ಏನು ಹೇಳಬೇಕೆಂದು ದೊಚುವುದಿಲ್ಲ. ಈ ಯುವತಿಯ ಸಂದರ್ಭದಲ್ಲಿ ಅಷ್ಟೇ ಅಲ್ಲಾ, ನನ್ನ ಇಡೀ ಜೀವನದಲ್ಲಿ ಯಾರೇ ಬಿಕ್ಕಳಿಸಿ ಅಳುವುದನ್ನ ಕಂಡರೆ ಕಲ್ಲಾಗುತ್ತೆನೆ. ಆದರೆ ಒಂದು ಮಾತ್ರ ಭಲ್ಲೆ. ಮನಸಿನ ಮತ್ತು ಧೇಹದ ಕನ್ನಿರು ಸೀಮಿತಾ. ಧಾರಕರವಾಗಿ ಹರಿದರು, ಕಣ್ಣೀರು ನಿಲ್ಲಲೇ ಬೇಕು. ಬಿಕ್ಕಳಿಕೆ ನಿಲ್ಲಲೇ ಬೇಕು. ಇದನ್ನು ನನಗೆ ನಾನೇ ಹೇಳಿಕೊಂಡು ಮನೆ ಕಡೆ ಹೆಜ್ಜೆ ಹಾಕಿದೆ.
– ಜಗದೀಶ್